  ಮೂಲದೊಡನೆ ಪರಿಶೀಲಿಸಿ

ಋತುಗಳು  
	ಕಾಂತಿವೃತ್ತದ ಮೇಲೆ ಸೂರ್ಯನ ನಾಲ್ಕು ನಿರ್ದಿಷ್ಟ ಸ್ಥಾನಗಳನ್ನು ಅವಲಂಬಿಸಿ ಉಂಟಾಗುವ ವರ್ಷದ ನಾಲ್ಕು ಸಹಜ ವಿಭಾಗಗಳು (ಸೀಸನ್ಸ್). ಯಾವುದೇ ಗ್ರಹಕ್ಕೆ ಬೆಳಕು ಉಷ್ಣ ಮೊದಲಾದ ಶಕ್ತಿದಾಯಕ ಆಕರ ಸೂರ್ಯ. ಸೂರ್ಯನಿಂದ ಪ್ರವಹಿಸುವ ಶಕ್ತಿ ಸರಿಸುಮಾರಾಗಿ ಏಕಪ್ರಕಾರವಾಗಿಯೇ ಇದ್ದರೂ ಗ್ರಹ ಅದನ್ನು ಅದೇ ದರದಲ್ಲಿ ಸ್ವೀಕರಿಸುತ್ತದೆ ಎನ್ನುವಂತಿಲ್ಲ. ಸ್ವೀಕರಣೆ ಮುಖ್ಯವಾಗಿ ನಾಲ್ಕು ಅಂಶಗಳನ್ನು ಅವಲಂಬಿಸಿದೆ- ಗ್ರಹ ಸೂರ್ಯನನ್ನು ಪರಿಭ್ರಮಿಸಲು ತೆಗೆದುಕೊಳ್ಳುವ ಕಾಲಾವಧಿ (ಇದು ಗ್ರಹದ ವರ್ಷ); ಸೂರ್ಯನಿಂದ ಗ್ರಹದ ಸರಾಸರಿ ದೂರ (ಇದು ಗ್ರಹದ ಕಕ್ಷೆಯ ತ್ರಿಜ್ಯ); ಗ್ರಹದ ಕಕ್ಷೆಯ ತಲ; ಗ್ರಹದ ಆವರ್ತನಾಕ್ಷದ ವಿನ್ಯಾಸ. ಭೂಮಿಯನ್ನು ಕುರಿತು ಈ ಅಂಶಗಳು ಹೀಗಿವೆ-ಒಂದು ವರ್ಷದ ಉದ್ದ 365.24 ದಿವಸಗಳು; ಕಕ್ಷೆಯ ತ್ರಿಜ್ಯ ಸುಮಾರು 15,60,00,000 ಕಿ.ಮೀ.; ಕಕ್ಷಾತಲ ಮತ್ತು ಆವರ್ತನಾಕ್ಷಗಳ ನಡುವಿನ ಕೋನ ಸುಮಾರು 66ಲಿ-33. ಇದರ ಪರಿಣಾಮವಾಗಿ ಕ್ರಾಂತಿವೃತ್ತ (ಕಕ್ಷಾತಲ ಆಕಾಶವೃತ್ತವನ್ನು ಭೇದಿಸುವ ಮಹಾವೃತ್ತ) ಮತ್ತು ವಿಷುವದ್‍ವೃತ್ತಗಳ (ಆವರ್ತನಾಕ್ಷಕ್ಕೆ ಭೂಮಿ ಕೇಂದ್ರದ ಮೂಲಕ ಲಂಬವಾಗಿ ಎಳೆದ ಸಮತಲ ಆಕಾಶಗೋಳವನ್ನು ಛೇದಿಸುವ ಮಹಾವೃತ್ತ) ನಡುವಿನ ಕೋನ 23ಲಿ27'. ಇವೆರಡು ವೃತ್ತಗಳೂ ಂ, ಃ ಬಿಂದುಗಳಲ್ಲಿ ಛೇದಿಸುತ್ತವೆ. ಂ, ಃ ಆಕಾಶಗೋಳದ ಒಂದು ವ್ಯಾಸ. ಇದರ ಕೇಂದ್ರಬಿಂದುವಿನಲ್ಲಿ ಭೂಮಿ (ಇ) ಇದೆ. ಭೂಮಿವಾಸಿಗಳಾದ ನಮಗೆ ಸೂರ್ಯನ ತೋರ್ಕೆಯ ವಾರ್ಷಿಕ ಚಲನೆ ಕ್ರಾಂತಿವೃತ್ತದಮೇಲೆ ಇದೆ. ಸೂರ್ಯ ಂS1ಃ ಅರ್ಧವೃತ್ತದಲ್ಲಿ ಚಲಿಸುತ್ತಿರುವಾಗ ಉತ್ತರದಲ್ಲಿರುವಂತೆಯೂ (ಅದು ವಿಷುವದ್ವøತ್ತದ ಉತ್ತರದಲ್ಲಿರುವುದರಿಂದ), ಃS2ಂ ಅರ್ಧವೃತ್ತದಲ್ಲಿ ಚಲಿಸುತ್ತಿರುವಾಗ ದಕ್ಷಿಣದಲ್ಲಿರುವಂತೆಯೂ ಭಾಸವಾಗುತ್ತದೆ. ಇಷ್ಟು ಮಾತ್ರವಲ್ಲ. S2 ರಿಂದ S1 ವರೆಗೆ ಸೂರ್ಯನ ಚಲನೆ ಉತ್ತರಾಭಿಮುಖಿಯಾಗಿಯೂ S1 ರಿಂದ S2 ರವರೆಗೆ ದಕ್ಷಿಣಾಭಿಮುಖವಾಗಿಯೂ ಇದೆ. ಭೂಮಿವಾಸಿಗಳಿಗೆ ಈ ವ್ಯತ್ಯಾಸಗಳ ಪರಿಣಾಮಗಳು: (1) ಮಾರ್ಚಿ 21ರಂದು ಸೂರ್ಯನ ದೈನಂದಿನ ಪಥ (ಮೂಡಿ ಮುಳುಗುವವರೆಗಿನ ಆಕಾಶಪಥ) ವಿಷುವದ್ವøತ್ತ. ಅಂದು ಸೂರ್ಯ ನೇರ ಪೂರ್ವ ಬಿಂದುವಿನಲ್ಲಿ ಮೂಡಿ ನೇರ ಪಶ್ಚಿಮಬಿಂದುವಿನಲ್ಲಿ ಕಂತುತ್ತದೆ. ಹಗಲುರಾತ್ರಿಗಳ ಉದ್ದ ಆ ದಿವಸ ಸಮಾನ. (2) ಮುಂದೆ ಸೂರ್ಯನ ದೈನಂದಿನ ಪಥಗಳು ಉತ್ತರಾಭಿಮುಖವಾಗಿ ಜಾರುತ್ತವೆ. 

ಚಿತ್ರ-1

ಜೂನ್ 21ರಂದು ಸೂರ್ಯನ ದೈನಂದಿನ ಪಥ ಅತಿ ಉತ್ತರಕ್ಕೆ ಸಾಗಿರುತ್ತದೆ. ಉತ್ತರಾರ್ಧಗೋಳದವರಿಗೆ ಅಂದು ಹಗಲಿನ ಉದ್ದ ಗರಿಷ್ಠ, ರಾತ್ರಿಯ ಉದ್ದ ಕನಿಷ್ಠ, ದಕ್ಷಿಣಾರ್ಧ ಗೋಳದವರೆಗೆ ಇದರ ವ್ಯತಿರಿಕ್ತ ಪರಿಸ್ಥಿತಿ, (3) ಮುಂಬರುವ ದಿವಸಗಳಲ್ಲಿ ದೈನಂದಿನ ಪಥಗಳು ದಕ್ಷಿಣದೆಡೆಗೆ ಸರಿಯುತ್ತವೆ. ಸೆಪ್ಟೆಂಬರ್ 21ರಂದು ಪಥ ಪುನಃ ವಿಷುವದ್ವøತ್ತ. ಮಾರ್ಚಿ 21ರ ಪರಿಸ್ಥಿತಿಯ ಪುನರಾವರ್ತನೆ. (4) ಅನಂತರದ ದಿವಸಗಳಲ್ಲಿಯೂ ದೈನಂದಿನ ಪಥಗಳು ದಕ್ಷಿಣಾಭಿಮುಖವಾಗಿಯೇ ಜಾರುತ್ತಿರುತ್ತವೆ. ಡಿಸೆಂಬರ್ 21ರಂದು ಇದು ಅತಿದಕ್ಷಿಣದಲ್ಲಿರುವುದು. ಉತ್ತರಾರ್ಧ ಗೋಳದವರಿಗೆ ಇದರ ವ್ಯತಿರಿಕ್ತ ಪರಿಸ್ಥಿತಿ. (5) ತರುವಾಯ ದೈನಂದಿನ ಪಥಗಳು ಉತ್ತರದೆಡೆಗೆ ಸರಿಯುತ್ತವೆ. ಮಾರ್ಚಿ 21ರಂದು ಹಿಂದಿನ ವರ್ಷ ಸಂಭವಿಸಿದ ಪರಿಸ್ಥಿತಿಯ ಪುನರಾವರ್ತನೆ ಆಗುವುದು.    
ಅವಧಿ
1
ಸೂರ್ಯನ ದೈನಂದಿನ
 ಪಥ
2
ಹಗಲು ರಾತ್ರಿಗಳಲ್ಲಿ ವ್ಯತ್ಯಾಸ

ಉತ್ತರಾರ್ಧ ಗೋಳದವರಿಗೆ
3
ದಕ್ಷಿಣಾರ್ಧ ಗೋಳದವರಿಗೆ
4

ಂ ಬಿಂದು ಮಾರ್ಚ್ 21
ವಿಷುವದ್ವøತ್ತ
ಉದ್ದಗಳು ಸಮಾನ (ಹಗಲು=ರಾತ್ರಿ)
ಉದ್ದಗಳು ಸಮಾನ (ಹಗಲು=ರಾತ್ರಿ)

ಂ ಯಿಂದ S1ರ ವರೆಗೆ
ಉತ್ತರಕ್ಕೆ ಸರಿಯುತ್ತಿದೆ
ಹಗಲು ಏರುತ್ತಿದೆ; ರಾತ್ರಿ ತಗ್ಗುತ್ತಿದೆ (ಹಗಲು>ರಾತ್ರಿ)
ಹಗಲು ತಗ್ಗುತ್ತಿದೆ; ರಾತ್ರಿ ಏರುತ್ತಿದೆ (ಹಗಲು<ರಾತ್ರಿ)

S1 ಬಿಂದು ಜೂನ್ 21
ಅತಿ ಉತ್ತರದಲ್ಲಿದೆ
ಹಗಲು ಗರಿಷ್ಠ ; ರಾತ್ರಿ ಕನಿಷ್ಠ
ಹಗಲು ಕನಿಷ್ಠ ; ರಾತ್ರಿ ಗರಿಷ್ಠ

S1 ರಿಂದ ಃಯ ವರೆಗೆ
ದಕ್ಷಿಣಕ್ಕೆ ಸರಿಯುತ್ತಿದೆ
ಹಗಲು ತಗ್ಗುತ್ತಿದೆ; ರಾತ್ರಿ ಏರುತ್ತಿದೆ (ಹಗಲು>ರಾತ್ರಿ)
ಹಗಲು ಏರುತ್ತಿದೆ; ರಾತ್ರಿ ತಗ್ಗುತ್ತಿದೆ (ಹಗಲು<ರಾತ್ರಿ)

ಃ ಬಿಂದು ಸೆಪ್ಟೆಂಬರ್ 21
ವಿಷುವದ್ವøತ್ತ
ಉದ್ದಗಳು ಸಮಾನ (ಹಗಲು=ರಾತ್ರಿ)
ಉದ್ದಗಳು ಸಮಾನ (ಹಗಲು=ರಾತ್ರಿ)

ಃ ಯಿಂದ S2ರ ವರೆಗೆ
ದಕ್ಷಿಣಕ್ಕೆ ಸರಿಯುತ್ತಿದೆ
ಹಗಲು ತಗ್ಗುತ್ತಿದೆ; ರಾತ್ರಿ ಏರುತ್ತಿದೆ (ಹಗಲು<ರಾತ್ರಿ)
ಹಗಲು ಏರುತ್ತಿದೆ; ರಾತ್ರಿ ತಗ್ಗುತ್ತಿದೆ (ಹಗಲು>ರಾತ್ರಿ)

S2 ಬಿಂದು ಡಿಸೆಂಬರ್ 21
ಅತಿ ದಕ್ಷಿಣದಲ್ಲಿದೆ
ಹಗಲು ಕನಿಷ್ಠ ; ರಾತ್ರಿ ಗರಿಷ್ಠ
ಹಗಲು ಗರಿಷ್ಠ ; ರಾತ್ರಿ ಕನಿಷ್ಠ

S2 ಯಿಂದ ಂ ಯ ವರೆಗೆ
ಉತ್ತರಕ್ಕೆ ಸರಿಯುತ್ತಿದೆ
ಹಗಲು ಏರುತ್ತಿದೆ; ರಾತ್ರಿ ತಗ್ಗುತ್ತಿದೆ (ಹಗಲು<ರಾತ್ರಿ)
ಹಗಲು ತಗ್ಗುತ್ತಿದೆ; ರಾತ್ರಿ ಏರುತ್ತಿದೆ (ಹಗಲು>ರಾತ್ರಿ)

	ಋತುಗಳನ್ನು ಜನ ತಿಳಿಯುವುದು ಹವಾಪರಿಸ್ಥಿತಿಗಳಲ್ಲಿ ಉಂಟಾಗುವ ವ್ಯತ್ಯಾಸಗಳಿಂದ. ಇವು ಪೂರ್ಣವಾಗಿ ಪ್ರಾದೇಶಿಕವಾಗಿವೆ. ಎಂದರೆ, ವರ್ಷದ ಯಾವುದೋ ದಿವಸದಲ್ಲಿ ಭೂಮಿಯ ಮೇಲಿನ ಎಲ್ಲ ಸ್ಥಳಗಳಲ್ಲಿಯೂ ಒಂದೇ ವಿಧದ ಹವೆ ಇರುವುದಿಲ್ಲ. ಅದರಲ್ಲೂ ಉತ್ತರಾರ್ಧಗೋಳಕ್ಕೂ ದಕ್ಷಿಣಾರ್ಧಗೋಳಕ್ಕೂ ತೀವ್ರ ವ್ಯತ್ಯಾಸಗಳಿವೆ. ಋತುಗಳ ಸ್ಥೂಲ ವಿವರಣೆಯನ್ನು ಕೆಳಗೆ ಕೊಟ್ಟಿದೆ.
ವಿವರಣೆ
ಋತುವಿನ ಹೆಸರು
ಅವಧಿ

ಉತ್ತರಾರ್ಧ ಗೋಳ
ದಕ್ಷಿಣಾರ್ಧ ಗೋಳ

ಮಾರ್ಚಿ 21ರಿಂದ ಜೂನ್ 21ರವರೆಗೆ. ಎಂದರೆ ಸೂರ್ಯ ವಸಂತ ವಿಷುವದ್ಬಿಂದುವನ್ನು (ಂ) ಪ್ರವೇಶಿಸಿದ ಕ್ಷಣದಿಂದ ದಕ್ಷಿಣಾಯನ ಬಿಂದುವನ್ನು (S2) ಪ್ರವೇಶಿಸುವ ವರೆಗಿನ ಅವಧಿ.
ವಸಂತ
ಶರತ್
92 ದಿ.
20 ಗಂ. 12ಮಿ.

ಜೂನ್ 21ರಿಂದ ಸೆಪ್ಟೆಂಬರ್ 21ರವರೆಗೆ, ಎಂದರೆ ಸೂರ್ಯ ಉತ್ತರಾಯಣವನ್ನು (S1)ಪ್ರವೇಶಿಸಿದ ಕ್ಷಣದಿಂದ ತುಲಾ ವಿಷುವದ್ಬಿಂದುವನ್ನು (ಃ) ಪ್ರವೇಶಿಸುವ ವರೆಗಿನ ಅವಧಿ
ಗ್ರೀಷ್ಮ
ಶಿಶಿರ
93 ದಿ.
14 ಗಂ. 24ಮಿ.

ಸೆಪ್ಟೆಂಬರ್ 21ರಿಂದ ಡಿಸೆಂಬರ್ 21ರವರೆಗೆ, ಎಂದರೆ ಸೂರ್ಯ ತುಲಾ ವಿಷುವದ್ಬಿಂದುವನ್ನು (ಃ) ಪ್ರವೇಶಿಸಿದ ಕ್ಷಣದಿಂದ ಉತ್ತರಾಯಣವನ್ನು (S2) ಪ್ರವೇಶಿಸುವ ವರೆಗಿನ ಅವಧಿ
ಶರತ್
ವಸಂತ
89 ದಿ.
18 ಗಂ. 42ಮಿ.

ಡಿಸೆಂಬರ್ 21ರಿಂದ ಮಾರ್ಚಿ 21ರವರೆಗೆ. ಎಂದರೆ ಸೂರ್ಯ ಉತ್ತರಾಯಣ ಬಿಂದುವನ್ನು (S2) ಪ್ರವೇಶಿಸಿದ ಕ್ಷಣದಿಂದ ವಸಂತ ವಿಷುವದ್ಬಿಂದುವನ್ನು (ಂ)ಪ್ರವೇಶಿಸುವ ವರೆಗಿನ ಅವಧಿ
ಶಿಶಿರ
ಗ್ರೀಷ್ಮ
89 ದಿ.
0 ಗಂ. 30 ಮಿ.

ಒಟ್ಟು ಅವಧಿ 365 ದಿ. 5 ಗಂ. 48 ಮಿ.

ಇದುವರೆಗೆ ಹೇಳಿರುವ ಖಗೋಳೀಯ ಕಾರಣಗಳು ಸಾರ್ವತ್ರಿಕವಾದವು. ಸ್ಥಳೀಯ ಋತುಭೇದಗಳು ಆಯಾ ಸ್ಥಳಗಳ ಮೇಲೆ ಸೂರ್ಯನಿಂದ ಪಾತವಾಗುವ ಉಷ್ಣವನ್ನು ಅವಲಂಬಿಸಿಕೊಂಡಿವೆ. 24 ಗಂಟೆಗಳ ಒಂದು ದಿವಸದಲ್ಲಿ ಒಂದು ಸ್ಥಳ ಸೂರ್ಯನಿಂದ ಪಡೆಯುವ ಉಷ್ಣ ಮೂರು ಮುಖ್ಯ ಅಂಶಗಳನ್ನು ಅವಲಂಬಿಸಿದೆ. 1. ಸ್ಥಳವನ್ನೂ ಸೂರ್ಯನನ್ನೂ ಜೋಡಿಸುವ ರೇಖೆ ನೆಲದೊಡನೆ ರಚಿಸುವ ಕೋನ; 2. ಹಗಲಿನ ಉದ್ದ; 3. ಭೂಮಿ-ಸೂರ್ಯ ದೂರ.
ಜೂನ್ 21ರಂದು ಉತ್ತರಾರ್ಧಗೋಳದ ಮೂರು ವಿಶಿಷ್ಟ ಸ್ಥಳಗಳನ್ನು ಪರಿಶೀಲಿಸಬಹುದು. ಉಷ್ಣವಲಯದ ಒಂದು ಸ್ಥಳ (10ಲಿ ಉ. ಅಕ್ಷಾಂಶ ಎಂದಿಟ್ಟುಕೊಳ್ಳಬಹುದು). ಉತ್ತರ ಸಮಶೀತೋಷ್ಣ ವಲಯದ ಒಂದು ಸ್ಥಳ (45ಲಿ ಉ. ಅಕ್ಷಾಂಶ ಎಂದಿಟ್ಟುಕೊಳ್ಳಬಹುದು.), ಉತ್ತರ ಶೀತವಲಯದ ಒಂದು ಸ್ಥಳ (75ಲಿ ಉ. ಅಕ್ಷಾಂಶ ಎಂದಿಟ್ಟುಕೊಳ್ಳಬಹುದು). ಭೂಮಿ-ಸೂರ್ಯ ದೂರ ಈ ಮೂರು ಸ್ಥಳಗಳಿಗೂ ಸರಿಸುಮಾರಾಗಿ ಒಂದೇ ಆಗಿದೆ. ಆದ್ದರಿಂದ ಉಳಿದ ಎರಡು ಅಂಶಗಳು ಆಯಾ ಸ್ಥಳಗಳು ಪಡೆಯುವ ಉಷ್ಣದ ಮೇಲೆ ಏನು ಪರಿಣಾಮ ಬೀರುತ್ತಿವೆ ಎಂಬುದನ್ನು ಪರಿಶೀಲಿಸಿದರೆ ಸಾಕು.

ವಿವರ
10ಲಿ ಉ. ಅ.
45ಲಿ ಉ. ಅ.
75ಲಿ ಉ. ಅ.

ಸ್ಥಳ-ಸೂರ್ಯ ರೇಖೆ ನೆಲದೊಡನೆ ರಚಿಸುವ ಕೋನದ ಗರಿಷ್ಠ ಬೆಲೆ
76ಲಿ33'
68ಲಿ27'
38ಲಿ27'

ಹಗಲಿನ ಉದ್ದ
12ಗಂ.35ಮಿ.20ಸೆ.
15ಗಂ.25ಮಿ.36ಸೆ.
ಸತತ ಹಗಲು

	ಅಕ್ಷಾಂಶ ಏರಿದಷ್ಟೂ ಸೂರ್ಯಕಿರಣಗಳ ಬಾಗು ಹೆಚ್ಚಾಗುತ್ತದೆ. ಆದ್ದರಿಂದ ವಿಸರಣೆಯಿಂದ ಅಧಿಕ ಉಷ್ಣ ನಷ್ಟವಾಗಿ ಹೋಗಿ ಸ್ಥಳಕ್ಕೆ ಲಭಿಸುವ ಉಷ್ಣದ ಪರಿಮಾಣ ಕಡಿಮೆಯಾಗುವುದು.
	ಉನ್ನತ ಅಕ್ಷಾಂಶಗಳಲ್ಲಿ ಹಗಲಿನ ಉದ್ದ ಹೆಚ್ಚಾಗಿದ್ದರೂ ಉಷ್ಣವಿಸರಣೆಯ ಮೇಲೆ ಅದರ ಪ್ರಭಾವ ಪರಿಣಾಮಕಾರಿಯಲ್ಲ. ಆದ್ದರಿಂದ ಒಂದೇ ದಿವಸ 10ಲಿ ಉ. ಅಕ್ಷಾಂಶದಲ್ಲಿ ಕಡುಬೇಸಗೆಯ ಧಗೆ ಇರುವಾಗ 75ಲಿ ಉ. ಅಕ್ಷಾಂಶದಲ್ಲಿ ಹಿತಕರ ಹವೆಯೇ ಇರಬಹುದು. ವಾಸ್ತವಿಕವಾಗಿ ಯಾವ ದಿವಸ ವಿಷುವದ್ವøತ್ತದಿಂದ ಸೂರ್ಯನ ಕೋನ (ಸೂರ್ಯನ ಘಂಟಾವೃತ್ತಾಂಶವೆಂದು ಇದರ ಹೆಸರು) ಸ್ಥಳದ ಅಕ್ಷಾಂಶಕ್ಕೆ ಅತಿ ಸಮೀಪವಾಗಿರುವುದೋ ಅಂದು ಆ ಸ್ಥಳ ಪಡೆಯುವ ಉಷ್ಣ ಗರಿಷ್ಠವಾಗಿರುತ್ತದೆ.
	ಚಿತ್ರದಿಂದ ಇನ್ನೊಂದು ವಿಷಯವನ್ನು ತಿಳಿಯಬಹುದು. ಸೂರ್ಯ-ಭೂಮಿ ದೂರ ಸೂರ್ಯೋಚ್ಚ ಬಿಂದುವಿನಲ್ಲಿ  (ಂ') ಭೂಮಿ ಇರುವಾಗ ಗರಿಷ್ಠವಾಗಿದೆ; ಸೂರ್ಯನೀಚ ಬಿಂದುವಿನಲ್ಲಿ (P) ಇರುವಾಗ ಕನಿಷ್ಠವಾಗಿದೆ. 

ಚಿತ್ರ-2

ಈ ದಿವಸಗಳು ಸರಿಸುಮಾರಾಗಿ ಜುಲೈ 2 ಮತ್ತು ಜನವರಿ 2. ಆದ್ದರಿಂದ ಜನವರಿ ದಿವಸಗಳಂದು ಭೂಮಿ ಒಟ್ಟಾಗಿ ಪಡೆಯುವ ಉಷ್ಣ ಜುಲೈ ದಿವಸಗಳಂದು ಪಡೆಯುವುದಕ್ಕಿಂತ ಹೆಚ್ಚಾಗಿರಬೇಕಷ್ಟೆ-ಎಂದರೆ ಆ ದಿವಸಗಳಂದು ಸೆಕೆಗಾಲವಾಗಿರಬೇಕಷ್ಟೆ. ಆದರೆ ಪರಿಸ್ಥಿತಿ ತದ್ವಿಪರೀತವಾಗಿದೆ ! ಇದರ ಕಾರಣವಿಷ್ಟೇ. ಭೂಮಿಯ ಆವರ್ತನಾಕ್ಷ ಮತ್ತು ಕಕ್ಷಾತಲಗಳ ನಡುವಿನ ಕೋನ (66ಲಿ33') ಸ್ಥಿರವಾಗಿಯೇ ಇರುವುದು; ಹೀಗಾಗಿ ನೀಚ ಬಿಂದುವಿಗೆ (P) ಭೂಮಿ ಬಂದಾಗ ಉತ್ತರಾರ್ಧಗೋಳ ಸೂರ್ಯವಿಮುಖವಾಗಿಯೂ ದಕ್ಷಿಣಾರ್ಧಗೋಳ ಸೂರ್ಯಭಿಮುಖವಾಗಿಯೂ ಉಚ್ಚಬಿಂದುವಿಗೆ (ಂ') ಬಂದಾಗ ಉತ್ತರಾರ್ಧಗೋಳ ಸೂರ್ಯಭಿಮುಖವಾಗಿಯೂ ದಕ್ಷಿಣಾರ್ಧಗೋಳ ಸೂರ್ಯವಿಮುಖವಾಗಿಯೂ ಇರುತ್ತವೆ. ಭೂಮಿಯ ಮೇಲೆ ಸೂರ್ಯನ ಉಷ್ಣಪಾತವನ್ನು ಕುರಿತು ಹೇಳಿದ ಮೊದಲಿನ ಎರಡು ಕಾರಣಗಳ ಪ್ರಭಾವದಿಂದ ಉತ್ತರಾರ್ಧಗೋಳದವರಿಗೆ ಸೂರ್ಯ ಅತಿ ಸಮೀಪವಾದಾಗ ಅತ್ಯುಷ್ಣದ ಅನುಭವ ಆಗುವುದಿಲ್ಲ; ಅತಿ ದೂರವಾದಾಗ ಅತಿಶೈತ್ಯದ ಅನುಭವ ಆಗುವುದಿಲ್ಲ. ಭೂಮಂಡಲದ ಅಧಿಕ ಜನಸಂಖ್ಯೆ ಉತ್ತರಾರ್ಧಗೋಳದಲ್ಲಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
	ಇದುವರೆಗಿನ ವಿವರಣೆಯ ಪ್ರಕಾರ ಉತ್ತರಾರ್ಧಗೋಳದವರ ಅತ್ಯುಷ್ಣ ದಿವಸ ಜೂನ್ 21, ಅತಿಶೈತ್ಯದ ದಿವಸ ಡಿಸೆಂಬರ್ 21 ಆಗಬೇಕೆಂದು ಭಾವಿಸುವುದು ಸಹಜ. ಆದರೆ ಬೇರೆ ಬೇರೆ ಪ್ರದೇಶಗಳ ಅಂಕಿ ಅಂಶಗಳ ಸಂಗ್ರಹಣೆಯಿಂದ ವಾಸ್ತವಿಕ ಪರಿಸ್ಥಿತಿ ಬೇರೆಯೇ ಎಂದು ತಿಳಿದಿದೆ. ಅತ್ಯುಷ್ಣದ ದಿವಸಗಳು ಜುಲೈ-ಆಗಸ್ಟ್‍ಗಳಲ್ಲಿಯೂ ಅತಿ ಶೈತ್ಯದ ದಿವಸಗಳು ಜನವರಿ-ಫೆಬ್ರವರಿಗಳಲ್ಲಿಯೂ ಬರುತ್ತವೆ. ಈ ವೈಪರೀತ್ಯದ ಕಾರಣ ಎರಡು: (1) ಆ ದಿವಸ ಸೂರ್ಯನಿಂದ ಪಡೆದುಕೊಂಡ ಉಷ್ಣ; (2) ಆ ದಿವಸ ವಿಸರಣೆಯಿಂದ ಕಳೆದುಕೊಂಡ ಉಷ್ಣ. ಮೊದಲಿನ ಅಂಶವನ್ನು ಕುರಿತು ವಿವರಣೆ ಈಗಾಗಲೇ ಬರೆದಿದೆ. ಎರಡನೆಯ ಅಂಶದ ವಿವರಣೆ-ಉಷ್ಣತೆ ಏರಿದಂತೆ ವಿಸರಣೆಯ ದರವೂ ಏರುತ್ತದೆ; ಜೂನ್ 21ರಂದು ಸ್ಥಳ ಪಡೆಯುವ ಉಷ್ಣ ಗರಿಷ್ಠವಾದರೂ ನೆಲ ಸಾಕಷ್ಟು ಕಾದಿರುವುದಿಲ್ಲ; ಆದ್ದರಿಂದ ಅಂದು ಉಷ್ಣತೆ ಸಾಕಷ್ಟು ಏರುವುದಿಲ್ಲ. ಮುಂದಿನ ಹಲವಾರು ವಾರಗಳಲ್ಲಿ ಲಭ್ಯ ಉಷ್ಣ ಕಡಿಮೆಯಾಗುತ್ತಿದ್ದರೂ ವಿಸರಣೆಯಿಂದ ಉಷ್ಣನಷ್ಟ ಸಾಕಷ್ಟು ನಡೆಯದೇ ಉಷ್ಣತೆ ಏರುತ್ತಲೇ ಹೋಗುವುದು. ಜುಲೈ-ಆಗಸ್ಟ್ ದಿವಸಗಳಲ್ಲಿ ಉಷ್ಣತೆ ಗರಿಷ್ಠ ಮಿತಿಯನ್ನು ತಲುಪುತ್ತದೆ. ಡಿಸೆಂಬರ್ 21ರಂದು ಲಭ್ಯ ಉಷ್ಣ ಕನಿಷ್ಠ; ಮತ್ತು ವಿಸರಣೆಯ ದರ ಲಭ್ಯ ಉಷ್ಣಕ್ಕಿಂತ ಹೆಚ್ಚು. ಮುಂದಿನ ದಿವಸಗಳಲ್ಲಿ ಲಭ್ಯ ಉಷ್ಣ ಕ್ರಮೇಣ ಏರಿದರೂ ವಿಸರಣೆಯ ದರ ಅದಕ್ಕಿಂತಲೂ ಹೆಚ್ಚಾಗಿಯೇ ಇರುವುದು. ಜನವರಿ-ಫೆಬ್ರವರಿ ದಿವಸಗಳಲ್ಲಿ ಇವುಗಳಲ್ಲಿ ಸಮತೋಲ ಬರುವುದು. ಅಂದು ಅತಿಶೈತ್ಯದ ದಿವಸ.
	ಸ್ಥಳೀಯ ಋತುವಿನ ಮೇಲೆ ಪ್ರಭಾವಕಾರೀ ಅಂಶಗಳಲ್ಲಿ ಅಕ್ಷಾಂಶ ಒಂದು ಎಂದು ನೋಡಿದ್ದಾಯಿತು. ಇತರ ಪ್ರಭಾವಗಳು-ಸ್ಥಳದ ಔನ್ನತ್ಯ, ಭೌಗೋಳಿಕ ಪರಿಸ್ಥಿತಿ (ಕಾಡು, ಮರುಭೂಮಿ, ಜವುಗು ನೆಲ, ನೀರು, ಸಮುದ್ರಸಾಮೀಪ್ಯ, ಇತ್ಯಾದಿ). ಕರ್ನಾಟಕ ರಾಜ್ಯದ ಉದಾಹರಣೆ ತೆಗೆದುಕೊಂಡರೆ ಕರಾವಳಿ ಪ್ರದೇಶದಲ್ಲಿ ಜೂನಿನಲ್ಲಿ ಜಡಿಮಳೆ ಸುರಿಯುತ್ತಿರುವುದು; ಬಿಜಾಪುರ ಭಾಗದಲ್ಲಿ ಆಗ ಅಸಹನೀಯ ಸೆಕೆ ಇರುತ್ತದೆ. ಹೀಗೆ ಒಂದು ಸ್ಥಳದಲ್ಲಿ ಋತುವನ್ನು (ಹವೆಯನ್ನು) ನಿರ್ಧರಿಸುವ ಅಂಶಗಳು, ಹಲವಾರು; ಅವುಗಳ ಸಮಗ್ರ ಪರಿಣಾಮ ಬಲುಸಂಕೀರ್ಣ. 
	ಜನಜೀವನದ ಋತುಗಳು: ಯೂರೋಪಿನ ದೇಶಗಳಲ್ಲಿ ಬೆಳೆಗಳ ವಾರ್ಷಿಕ ಚಕ್ರಕ್ಕೂ ಋತುಗಳಿಗೂ ತಾರ್ಕಣೆ ಕಲ್ಪಿಸಲಾಗಿದೆ. ಚಳಿಯಲ್ಲಿ ಸುಪ್ತಾವಸ್ಥೆ: ವಸಂತದಲ್ಲಿ ಬೀಜಾವಾಪನೆ: ಬೇಸಗೆಯಲ್ಲಿ ಬೆಳೆವಣಿಗೆ: ಶರತ್ತಿನಲ್ಲಿ ಸುಗ್ಗಿ. ಇದು ಬೇಸಾಯ ಚಕ್ರ. ಆದರೆ ವಾಸ್ತವವಾಗಿ ಋತುಗಳಿಗೂ ಈ ವ್ಯವಸಾಯ ಚಟುವಟಿಕೆಗಳಿಗೂ ನಿಖರವಾದ ತಾಳೆಯೇನೂ ಇಲ್ಲ. ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸವಾಗುವ ಕೆಲವು ಪ್ರದೇಶಗಳಲ್ಲಿ ಈ ವ್ಯತ್ಯಾಸಗಳಿಗೆ ಅನುಗುಣವಾಗಿ ಪ್ರಾಣಿಗಳ ಮೈ ಮೇಲಣ ಕೂದಲಿನ ಅಥವಾ ಪುಕ್ಕದ ಬಣ್ಣ ದಟ್ಟತೆಗಳು ವ್ಯತ್ಯಾಸವಾಗುತ್ತವೆ. ಈಜಿಪ್ಟಿನಲ್ಲಿ ನೈಲ್‍ನದಿಯ ಪ್ರವಾಹಕ್ಕೆ ತಕ್ಕಂತೆ ವ್ಯವಸಾಯ ಕಾರ್ಯ ನಿಯಂತ್ರಿತವಾಗುವುದರಿಂದ ಅಲ್ಲಿ ನದಿಯ ಆಯಾಕಾಲಗಳ ನೀರಿನ ಮಟ್ಟಗಳಿಗೆ ಅನುಸಾರವಾಗಿ ಋತುಗಳು ಹೆಸರು ತಳೆದಿವೆ. ಉತ್ತರ-ದಕ್ಷಿಣ ಮೇರು ಪ್ರದೇಶಗಳಲ್ಲಿ ವಸಂತ ಶರದೃತುಗಳು ಬಲು ಸಂಕ್ಷಿಪ್ತ. ಅಲ್ಲಿ ಬೇಸಗೆ-ಚಳಿಗಾಲಗಳೆಂಬ ಎರಡೇ ಪ್ರಧಾನ: ಬೇಸಗೆಗಿಂತ ಚಳಿಗಾಲ ಮೊಟಕು. ದಕ್ಷಿಣಕ್ಕೆ ಸಾಗಿದಂತೆ ನಾಲ್ಕು ಋತುಗಳೇ ಹೆಚ್ಚು ಖಚಿತವಾಗಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಖಂಡಾಂತರ ಪ್ರದೇಶಗಳಲ್ಲಿ ಒಂದು ಋತುವಿನಿಂದ ಇನ್ನೊಂದು ಋತುವಿಗೆ ಥಟ್ಟನೆ ವ್ಯತ್ಯಾಸವಾಗುತ್ತದೆ. ಸಮುದ್ರ ಸನಿಹದ ಪ್ರದೇಶಗಳಲ್ಲಿ ಉಷ್ಣತೆ ಏರುವುದೂ ಇಳಿಯುವುದೂ ನಿಧಾನವಾದ್ದರಿಂದ ಋತುಗಳ ಆಗಮನವೂ ನಿರ್ಗಮನವೂ ಬೇಗನೆಯೋ ತಡವಾಗಿಯೋ ಆಗಬಹುದು. ಉಪೋಷ್ಣವಲಯ ಪ್ರದೇಶಗಳಲ್ಲಿ ನಾಲ್ಕು ಋತುಗಳ ಮೇರೆಗಳು ಅಸ್ಪಷ್ಟ.
	ಭಾರತೀಯ ಕ್ರಮದಲ್ಲಿ ಋತುಗಳು: ಆರು ವಿಧದ ಕಾಲ ವಿಭಾಗಗಳಲ್ಲಿ ಮೂರನೆಯ ವಿಭಾಗ ಋತು. ಇದರ ಪರಿಮಾಣ ವರ್ಷದ ಆರನೆಯ ಒಂದು ಭಾಗ. ಎಂದರೆ ಎರಡು ತಿಂಗಳುಗಳ ಕಾಲ. ಅಥವಾ ಅರುವತ್ತು ದಿವಸಗಳು. ಅಧಿಕಮಾಸ ಬರುವ ವರ್ಷಗಳಲ್ಲಿ ಈ ಮಾಸ ಬರುವ ಋತುವಿನ ದಿವಸ ಸಂಖ್ಯೆ ತೊಂಬತ್ತಾಗುತ್ತದೆ ಮೂರು ಮಾಸಗಳ ಕಾಲ; ಪ್ರಮಾಣ ಇದ್ದರೂ ಒಂದೇ ಹೆಸರಿನ ಎರಡು ಮಾಸಗಳನ್ನು ಒಂದೇ ತಿಂಗಳೆಂದು ಗಣನೆಗೆ ತೆಗೆದುಕೊಳ್ಳವುದರಿಂದ ಈ ಋತುವಿನಲ್ಲಿ ಅರುವತ್ತು ದಿವಸಗಳ ಒಂದು ತಿಂಗಳು ಮತ್ತು ಮೂವತ್ತು ದಿವಸಗಳ ಮತ್ತೊಂದು ತಿಂಗಳು. ಹೀಗೆ ಎರಡು ತಿಂಗಳುಗಳಿರುತ್ತವೆ. ಈ ದಿವಸ ಸಂಖ್ಯೆ ಮಧ್ಯಮ ಮಾಸ ಗಣನೆಯಂತೆ. ಸ್ಫುಟ ಗಣನೆಯಲ್ಲಿ ಒಂದೆರಡು ದಿವಸಗಳು ಹೆಚ್ಚುಕಡಿಮೆ ಆಗುವುದುಂಟು.
	ಒಂದು ವರ್ಷದಲ್ಲಿ ಒಟ್ಟು ಆರು ಋತುಗಳಿವೆ. ಚೈತ್ರಶುಕ್ಲ ಪ್ರಥಮ ದಿವಸದಿಂದ ವಸಂತಋತು ಪ್ರಾರಂಭವಾಗುತ್ತದೆ. ಇದು ವೈಶಾಖ ಮಾಸ ಅಮಾವಾಸ್ಯೆಯಂದು ಮುಗಿಯುತ್ತದೆ. ಜೇಷ್ಠ ಶುಕ್ಲ ಪಾಡ್ಯದ ದಿವಸ ಗ್ರೀಷ್ಮ ಋತು ಪ್ರಾರಂಭವಾಗಿ ಆಷಾಢ ಅಮಾವಾಸ್ಯೆಯ ದಿವಸ ಮುಗಿಯುತ್ತದೆ. ಶ್ರಾವಣ ಶುಕ್ಲ ಪ್ರಥಮ ದಿವಸ ವರ್ಷಋತು ಪ್ರಾರಂಭವಾಗಿ ಭಾದ್ರಪದ ತಿಂಗಳಿನ ಅಮಾವಾಸ್ಯೆಯಂದು ಮುಗಿಯುತ್ತದೆ. ಆಶ್ವಯುಜ ಶುಕ್ಲ ಪ್ರಥಮ ದಿವಸ ಶರದೃತು ಪ್ರಾರಂಭವಾಗಿ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಮುಗಿಯುತ್ತದೆ. ಮಾರ್ಗಶಿರ ಶುಕ್ಲ ಪ್ರಥಮ ದಿವಸ ಹೇಮಂತ ಋತು ಪ್ರಾರಂಭವಾಗಿ ಪುಷ್ಯಮಾಸದ ಅಮಾವಾಸ್ಯೆಗೆ ಮುಗಿಯುತ್ತದೆ. ಮಾಘಮಾಸದ ಪ್ರಥಮ ದಿವಸ ಶಿಶಿರ ಋತು ಪ್ರಾರಂಭವಾಗಿ ಫಾಲ್ಗುನ ಮಾಸ ಅಮಾವಾಸ್ಯೆಯಂದು ಮುಗಿಯುತ್ತದೆ. ಈ ಆರು ಋತುಗಳಲ್ಲಿ ಸಾಮಾನ್ಯವಾಗಿ ಶಿಶಿರ, ವಸಂತ, ಗ್ರೀಷ್ಮ ಋತುಗಳು ಉತ್ತರಾಯನಕ್ಕೂ ವರ್ಷ, ಶರತ್, ಹೇಮಂತ ಋತುಗಳು ದಕ್ಷಿಣಾಯನಕ್ಕೂ ಸೇರುತ್ತವೆ. ಹೀಗೆ ಶುಕ್ಲಪಕ್ಷಾದಿಯಿಂದ ಅಮಾವಾಸ್ಯೆಯ ವರೆಗೆ ಕಾಲಗಣನೆ ಮಾಡುವ ಈ ಋತು ವಿಭಾಗಕ್ಕೆ ಚಾಂದ್ರ ಋತುಗಳೆಂದು ಹೆಸರು.
	ಸೌರಮಾನದಲ್ಲಿ ಋತುಗಳ ಕಾಲ: ಸೌರ ಋತುಗಳು ಇದರಂತೆ ಮೇಷ ರಾಶಿಗೆ ಸೂರ್ಯನು ಪ್ರವೇಶ ಮಾಡುವ ದಿವಸ ವಸಂತ ಋತುವಿಗೆ ಪ್ರಾರಂಭ. ಮಿಥುನ, ಸಿಂಹ, ತುಲಾ, ಧನುಸ್ಸು, ಕುಂಭ, ಈ ರಾಶಿಗಳಿಗೆ ಸೂರ್ಯ ಪ್ರವೇಶಿಸಿದಾಗ ಕ್ರಮವಾಗಿ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಋತುಗಳು ಪ್ರಾರಂಭವಾಗುತ್ತವೆ. ಈ ಗಣನಾಕ್ರಮದಲ್ಲಿ ಋತುವಿನ ಕಾಲ ಅರುವತ್ತು ದಿವಸಗಳು. ಇದರಲ್ಲಿ ತೊಂಬತ್ತು ದಿವಸಗಳು ಬರುವ ಋತುವಿರುವುದಿಲ್ಲ. ಸೌರಮಾನದ ಪ್ರಕಾರ ಸೂರ್ಯ ಮೇಷ-ವೃಷಭ ರಾಶಿಗಳಲ್ಲಿ ಸಂಕ್ರಮಿಸುವಾಗ ಹುಟ್ಟುವ ವಸಂತ ಋತುವಿನಲ್ಲಿ ಗಿಡಮರಗಳು ಚಿಗುರುತ್ತವೆ. ಹೂ ಬಿರಿಯುತ್ತದೆ. ಮೋಡವಿಲ್ಲದ ಆಕಾಶ; ಸ್ವಚ್ಫ ನೀಲವರ್ಣ. ಇದನ್ನನುಸರಿಸಿ ಬರುವ ಗ್ರೀಷ್ಮ ಋತುವಿನಲ್ಲಿ ಬಿಸಿಲ ಬೇಗೆ. ಇದರ ಫಲವಾಗಿ ವಾಯುಮಂಡಲದಲ್ಲಿ ಆದ್ರ್ರತೆ ಕಡಿಮೆ; ನೀರಿನ ಅಂಶ ಕಳೆದುಕೊಂಡ ವಾಯುಮಂಡಲದ ಒತ್ತಡ ಕಡಿಮೆಯಾಗುತ್ತದೆ. ನೆರೆಹೊರೆಗಳಲ್ಲಿ ಸಾಗರಗಳ ಮೇಲೆ ಅರಡಿರುವ ವಾಯುಮಂಡಲದಲ್ಲಿ ಆದ್ರ್ರತೆಯೂ ಒತ್ತಡವೂ ಇದ್ದು ಅವು ತಗ್ಗು ಒತ್ತಡಗಳಿರುವೆಡೆಗೆ ನುಗ್ಗಿ ಬರುತ್ತವೆ. ಇದರಿಂದ ಮಳೆಯಾಗುತ್ತದೆ. ಹೀಗಾಗಿ ಗ್ರೀಷ್ಮಋತುವಿನಲ್ಲಿ ಆಂತರಿಕ್ಷದಲ್ಲಿ ಮೋಡ ಕವಿದಿರುತ್ತದೆ; ಪ್ರಾರಂಭದಲ್ಲಿ ಮಳೆ ಧಾರೆಧಾರೆಯಾಗಿಯೂ ಮಾರುತಗಳು ನೆಲೆಯೂರಿದಂತೆಲ್ಲ ಅಂತರಗಳಲ್ಲಿ ತುಂತುರು ತುಂತುರಾಗಿಯೂ ಸುರಿಯುತ್ತದೆ. ಗ್ರೀಷ್ಮ ಋತುವಿನ ಕೊನೆಯಲ್ಲಿ ಪ್ರಾರಂಭವಾಗುವ ಮಳೆ, ಗುಡುಗು ಮಿಂಚು ಸಿಡಿಲುಗಳಿಂದ ಕೂಡಿರುವಂಥದು. ಅಲ್ಲದೆ ಈ ಋತುವಿನಲ್ಲಿ ಉಷ್ಣಾಧಿಕ್ಯದಿಂದ ವಾಯುವಿನ ಪರಿಸರಣವಾಗಿ ವಾಯುಮಂಡಲದ ಉನ್ನತವಲಯಗಳಲ್ಲಿ ಆದ್ರ್ರತೆಯ ಸಂಚಯವಾಗಿ ಧಾರೆಧಾರೆಯಾಗಿ ಮಳೆ ಸುರಿಯುತ್ತದೆ. ಹಗಲೆಲ್ಲ ಸೊರಗಿರುವ ರಣರಣ ಬಿಸಿಲ ಬೇಗೆ. ಸಂಜೆಯಾಗುತ್ತಲೆ ಕಾರ್ಮೋಡ ಕವಿದು ಸಿಡಿಲೊಡಗೂಡಿ ಸುರಿಯುವ ಧಾರಾಕಾರ ಮಳೆ. ಇದು ಗ್ರೀಷ್ಮಋತುವಿನ ವಿಶಿಷ್ಟ ಗುಣಲಕ್ಷಣ. ಆಷಾಢ ಮಾಸದಲ್ಲಿ ಬಿರುಸಾದ ಕುಳಿರ್ಗಾಳಿ ಬೀಸುತ್ತದೆ. ಆಷಾಢಮಾಸ ಕೊನೆಗೊಂಡು ಶ್ರಾವಣ ಮಾಸ ಕಾಲಿರಿಸುವ ವೇಳೆಗೆ ಭಾರತದಲ್ಲಿ ನೈಋತ್ಯಮಾರುತಗಳು ಪ್ರಾರಂಭವಾಗಿ ನೆಲೆಯೂರಿರುತ್ತವೆ. ಇವು ನೈಋತ್ಯದಲ್ಲಿರುವ ಅರಬ್ಬೀಸಮುದ್ರ ಮತ್ತು ಹಿಂದೂ ಮಹಾಸಾಗರಗಳಿಂದ ಬೀಸತೊಡಗಿ, ಈಶಾನ್ಯ ದಿಕ್ಕಿಗೆ ಚಲಿಸುತ್ತ, ದಕ್ಷಿಣ ಭಾರತ ಪರ್ಯಾಯದ್ವೀಪಕ್ಕೂ (ಅದರಲ್ಲೂ ವಿಶೇಷವಾಗಿ ಪಶ್ಚಿಮ ಕರಾವಳಿಯಲ್ಲಿ) ಲಂಕಾದ್ವೀಪಕ್ಕೂ ಮಳೆ ತರುತ್ತವೆ. ವರ್ಷಋತುವನ್ನನುಸರಿಸುವ ಶರದೃತು ಮಿಶ್ರ ಹವಾಗುಣ ತಳೆದಿರುವಂಥದು. ಹಗಲು ಬೆಚ್ಚಗಿದ್ದು ಇರುಳು ತಂಪಾಗಿರುತ್ತದೆ. ಹೇಮಂತ ಋತುವಿನಲ್ಲಿ ಚಳಿ ಪ್ರಾರಂಭ. ದಕ್ಷಿಣ ದೇಶದಲ್ಲಿ ಮಂಜು ಬೀಳುವ ಕಾಲ. ಉತ್ತರ ಭಾರತದಲ್ಲಂತೂ ವರ್ಣಿಸಲಾರದ ಚಳಿ. ಹಿಮಾಚಲ ಶೃಂಗಗಳ ಮೇಲೆ ಹಿಮ ಹೆಪ್ಪುಗಟ್ಟಿರುತ್ತದೆ. ಸೌರಮಾನದ ಪ್ರಕಾರ ಇದು ಧನುಸ್ಸು-ಮಕರ ಸಂಕ್ರಮಣಗಳ ಕಾಲ. ಇದನ್ನನುಸರಿಸಿ ಬರುವ ಶಿಶಿರಋತುವಿನಲ್ಲಿ ಮರಗಿಡಗಳ ಹಣ್ಣಿಲೆಗಳು ಉದುರಿಚಿಗುರೊಡೆಯತೊಡಗುತ್ತವೆ.
	ಕಾಲಧರ್ಮಾನುಗುಣವಾಗಿ ಒಂದು ವರ್ಷದಲ್ಲಿ ಮೂರು ಋತುಗಳೆಂದೂ ಎರಡು ಋತುಗಳೆಂದೂ ಕೆಲವರು ಅಭಿಪ್ರಾಯಪಟ್ಟಿರುತ್ತಾರೆ. ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ- ಈ ನಾಲ್ಕು ತಿಂಗಳುಗಳ ಕಾಲಕ್ಕೆ ಶೀತವೆಂದೂ ಫಾಲ್ಗುಣ, ಚೈತ್ರ, ವೈಶಾಖ, ಜ್ಯೇಷ್ಠ ಈ ನಾಲ್ಕು ತಿಂಗಳುಗಳ ಕಾಲಕ್ಕೆ ಗ್ರೀಷ್ಮವೆಂದೂ ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ ಈ ನಾಲ್ಕು ತಿಂಗಳುಗಳ ಕಾಲಕ್ಕೆ ವರ್ಷ ಎಂದೂ ಕರೆಯುತ್ತಾರೆ. ಸ್ಮøತಿಯಲ್ಲಿ ಕಾರ್ತಿಕ ಮೊದಲು ಆರು ತಿಂಗಳುಗಳ ಕಾಲಕ್ಕೆ ಶೀತವೆಂದೂ, ವೈಶಾಖ ಮೊದಲು ಆರು ತಿಂಗಳುಗಳ ಕಾಲಕ್ಕೆ ಗ್ರೀಷ್ಮ ಎಂದೂ ಎರಡು ವಿಭಾಗಗಳು ಮಾತ್ರ ಇರುವುದು ಕಂಡುಬರುತ್ತದೆ.
	ಸ್ತ್ರೀಯರು ಮುಟ್ಟಾಗುವ ಕಾಲಕ್ಕೂ ಋತುಕಾಲವೆಂದು ಹೆಸರಿದೆ.
	ಹೆಂಗಸರು ಮುಟ್ಟಾದ ಬಳಿಕ ಹದಿನಾರು ದಿವಸಗಳ ಕಾಲ ಗರ್ಭಧರಿಸಲು ಸಮರ್ಥರಾಗಿರುತ್ತಾರೆ. ಈ ಕಾಲಕ್ಕೂ ಋತುಕಾಲವೆಂದು ಹೆಸರು.
	ಶಿವ ಮತ್ತು ವಿಷ್ಣುವಿಗೂ ಋತು ಎಂಬ ನಾಮವಿದೆ.				     
 (ಐ.ಎಸ್.ಪಿ.; ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ